ವಿಶಾಲವಾದ ಹಸಿರ ಸಿರಿಯ ಮಡಿಲು ಸಮೃದ್ಧಿ ಸೊಬಗಿನ ನೆಲೆಬೀಡು ಸುರಕ್ಷತೆಯ ರಕ್ಷಾಕವಚ ಮಲ್ನಾಡ್ ಸ್ಟೇಸ್

  • Home
  • ವಿಶಾಲವಾದ ಹಸಿರ ಸಿರಿಯ ಮಡಿಲು ಸಮೃದ್ಧಿ ಸೊಬಗಿನ ನೆಲೆಬೀಡು ಸುರಕ್ಷತೆಯ ರಕ್ಷಾಕವಚ ಮಲ್ನಾಡ್ ಸ್ಟೇಸ್

ಪ್ರವಾಸ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಅದ್ರಲ್ಲೂ ಮಳೆಗಾಲ ಅಂತೂ ಮಿಸ್ ಮದ್ಕೊಳೋಹಾಗೆ ಇಲ್ಲ ಆದ್ರೂ ಈ ವರ್ಷ ಅಂದ್ರೆ 2020 ಪ್ರವಾಸಿ ತಾಣಗಳಿಗೆ ಬಿದ್ದಂತ ಹೊಡೆತ ನಿಮ್ಗೂ ಗೊತ್ತಿದೆ ಯಾರೋ ಬಿಟ್ಟಿದ್ ವೈರಸ್ ಗೆ ಪ್ರಪಂಚ ನೇ ತಲೆಕೆಳಗಾಗಿ ಮಾಡಿ ಎಲ್ಲರಲ್ಲೂ ಬಯ ಹುಟ್ಟಿಸಿದೆ. ಎಲ್ಲೂ ಹೋಗೊಕ್ ಆಗ್ದೆ ಇರೂದಕ್ಕು ಆಗ್ದೆ ನಿಮ್ಮ ಕಷ್ಟ ನಮ್ಗೆ ಅರ್ಥ ಹಗ್ತಿದೆ. ಎಲ್ರೂ ಆಸೆ ಒಂದೇ ಸ್ವಲ್ಪ ದಿನ ಒಂದ್ ಒಳ್ಳೆ ಜಾಗಕ್ಕೆ ಹೋಗಿ ಯಾವುದೋ ಬೆಟ್ಟ ಹತ್ತಿ ಕೂತು ಇಲ್ಲ ಯಾವುದೋ ಜರಿ ಮೇಲೆ ನಿಂತು ಒಂದ್ ಒಳ್ಳೆ ಅನುಭವ ಪಡೆಯೋ ಆಸೆಲಿ ಕಾಯ್ತಾ ಕೂತಿದ್ದಿರ..: ಬೆಳಿಗ್ಗೆ ಎದ್ದು ಗಂಟೆ 9 ಆದ್ರೂ ಏನು ಕಾಣೋದೇ ಇಲ್ಲ ಅನ್ನೋಷ್ಟು ಮಂಜು… ಕೊರೆಯೋ ಚಳಿಗೆ ಬಿಸಿ ಬಿಸಿ ಕಾಫಿ ಸಹ ಕ್ಷಣಾರ್ಧಲ್ಲಿ ತಣ್ಣಗೆ ಹಾಗೋದು. ಗಾಳಿ ಬಿಸಿದಗಲೆಲ್ಲ ಮಂಜು ಸರಿದು ಕಾಣಸಿಗುವ ಪರ್ವತ ಶ್ರೇಣಿಗಳು ಕಾಡಿನ ಮದ್ಯೆ ಕೂಗುವ ಹಕ್ಕಿ ಪಕ್ಷಿಗಳ ಸಂಗೀತಕ್ಕೆ ಸೂರ್ಯೋದಯ ವಾಗುತಿದೆಯೇನೋ ಎಂದೆನಿಸುತ್ತದೆ. ಎಷ್ಟು ನೋಡಿದರೂ ಕೊನೆಯೇ ಇಲ್ಲದಿರುವಸ್ತು ಹಸಿರು ತನುಮನ ತಪೇರೆಯೋ ಮುಂಗಾರು ಮಳೆ. ಕಾಡು ದಾಟಿ ಕಣಿವೆ ಹಾರಿ ನಡೆಯುವಾಗ ಎಗರಿ ಓಡುವ ಜಿಂಕೆ ನವಿಲುಗಳು .
ರಾಜಗಾಂಭೀರ್ಯದಿಂದ ಕಾಡಿನಲ್ಲಿ ಓಡಾಡೋ ಗಜರಾಜ. ಇಂಥ ದೃಶ್ಯಗಳನ್ನು ಕೇಳುವುದಕ್ಕೆ ಓದುವುದಕ್ಕೆ ಇಷ್ಟು ಚಂದ ಅನಿಸುವಾಗ ಆ ಜಾಗದಲ್ಲಿ ನಿಮ್ಮನು ನೀವು ಊಹಿಸಿಕೊಂಡರೆ ಎಷ್ಟು ಅದ್ಭುತ ಅಲ್ವಾ . ಇಂಥ ಸಮಯದಲ್ಲಿ ಪ್ರವಾಸಿಗರು ತಮ್ಮ ತಮ್ಮ ನೆಚ್ಚಿನ ತಾಣಗಳಿಗೆ ಪ್ರತಿ ವರ್ಷ ಮೋಜು, ಮಸ್ತಿ ಮಾಡ್ತಿದ್ದೊರಂತು ಒಟ್ಟೆ ಒಳಗಿನ ಹೆಗ್ಗಣ್ಣ ಓಡಾಡೋ ಹಾಗೆ ಮನೇಲೇ ಮುಲೆಗುಂಪಾಗಿ (Quarantine) ಕೂತು ಯಾವಾಗ ಎಲ್ಲ ಮುಗಿಯುತ್ತೋ ಅಂತ ದೇವ್ರಿಗೆ ಸಾಷ್ಟಾಂಗ ನಮಸ್ಕಾರ ಹಾಕಿರೋದು ಉಂಟು ಆದ್ರೆ ಏನ್ ಮಾಡೋದು ದೇವಸ್ಥಾನಕ್ಕೂ ಸಹ ಕರೋನ ಬಿಸಿ ತಟ್ಟಿದೆ. ಹೀಗಿರುವಾಗ ಎಲ್ಲ ಪ್ರವಾಸಿಗರಿಗೆ, ಸವಾರರಿಗೆ, ಪಟ್ಟಣದ ಜೀವನ ದಿಂದ ಸ್ವಲ್ಪ ಮಟ್ಟಿಗೆ ವಿರಾಮ ಬೇಕು ಅಂತ ಎಲ್ಲರಿಗೂ ಅನ್ಸುತ್ತೆ . ನಿಮ್ಮ ಕನಸಿಗೆ ಏಣಿ ಹಾಕಿ ಹತ್ಸೋ ಕೆಲ್ಸಾ ನಮ್ದು .

ಹಾಗೆ ನಿಮಲ್ಲಿ ಏನಪ್ಪಾ ಇವನು ಕರೀನಾ ಬಂದು ದೇಶನೆ ಬಯದಿಂದ ಇದ್ರೆ …! ಒಹ್ಹ್ ತಪಯ್ತು ಕರಿನಾ ಅಲ್ಲ ಕರೋನ ಬಂದು ದೇಶನೆ ಬಯದಿಂದ ಇದ್ರೆ ಪ್ರವಾಸ ಅಂತಾನೆ ಅಂಕೊಬೇಡಿ..! ನಿಮ್ಮ ಸುರಕ್ಷತೆ ನಮ್ಮ ಮೊದಲ ಆದ್ಯತೆ ..ಅದ್ರ ಬಾಗ್ಗೆ ಹೇಳ್ತೀನಿ ಹಾಗೆ ಒದ್ಕೊಂಡ್ ಬನ್ನಿ…ನಿಮ್ಗೆ ನೀವ್ ನೋಡ್ಬೇಕು ಅಂತ ಪಟ್ಟಿ ಮಾಡಿರೋ ಸ್ಥಳದಲ್ಲಿ ನಾವ್ ಸ್ಟೇ ಕೊಡ್ತೀವಿ ಸ್ಟೇ ಅಂತ ಹೇಳಿದ ತಕ್ಷಣ ಎಲ್ಲರಿಗೂ ಬರೋದು ರೆಸಾರ್ಟ್ ಅಥವ ಹೋಂಸ್ಟೇ ಇವೆರಡಕ್ಕೂ ವ್ಯತ್ಯಾಸ ಏನು ಅಂತ ಎಲ್ಲರಿಗೂ ಅಷ್ಟಾಗಿ ಗೊತ್ತಿರಲಿಕ್ಕಿಲ್ಲ . ಬನ್ನಿ ನನ್ ಹೇಳ್ತೀನಿ. ಮೊದನೆಯದಾಗಿ ರೆಸಾರ್ಟ್ ಗೆ ಹೋಲಿಸಿದರೆ ಹೋಂ ಸ್ಟೇ ಬಹಳ ಅಗ್ಗವಾಗಿ ಸಿಗುವಂತಹದು ಹಾಗೆ ನಿಮ್ಮ ಮತ್ತೊಂದು ಮನೆಯ ಹಾಗೆ ಕಾಣಸಿಗುವುದು ವಿಶೇಷ . ಕೇವಲ ಬಂದು ಹೋಗಿ ಮರೆಯುವಂತಹ ಅನುಭವ ಕಂಡಿತಾ ಅಲ್ಲ ನೀವು ಇದ್ದ ಅಷ್ಟು ದಿನದ ಭಾವನಾತ್ಮಕ ಪಯಣದ ನೆನಪಿನ ಬುತ್ತಿಯನ್ನೆ ಕೊಂಡೊಯ್ಯುವುದು ಕಚಿತ.
ಊಟ ತಿಂಡಿಯ ವಿಚಾರದಲ್ಲಿ ಅತಿಥಿಯ ಆಯ್ಕೆಯ ಅನುಗುಣವಾಗಿ ವಿಶೇಷ ದೇಸಿ ಉಪಹಾರ (local food culture ). ಆರೋಗ್ಯಕರ ಉಪಹಾರ ಅದು ಸಸ್ಯಾಹಾರಿ ಶಾಖಾಹಾರಿ ( veg & non veg). ಎರಡು ಬಗೆಯ ಉಪಹಾರ ಊಟದ ವಿಚಾರದಲ್ಲಿ ಎಲ್ಲರಿಗೂ ಮೂಡುವ ಪ್ರಶ್ನೆ ಅಡುಗೆ ಸೋಡ ಹಾಗೂ ಉತ್ತಮ ಮಟ್ಟದ ಊಟ ಸಿಗುತ್ತದೆಯೋ ಇಲ್ಲವೋ ಎಂಬ ಪ್ರಶ್ನೆ .. ?? ಮೊದಲೇನೆಯದಾಗಿ ನೀವು ಇರುವಂತಹ ಸ್ಥಳ ಹೋಂಸ್ಟೇ ಮನೆಯ ರೀತಿಯ ಊಟ ತಿಂಡಿ ಸ್ವಚತೆ ಎಲ್ಲ ಒಳಗೊಂಡಿರುತ್ತದೆ ಉಪಹಾರ ವಿಷಯದಲ್ಲಿ ಯಾವುದೇ ನಿರ್ಲಕ್ಷ ಅಥವ ರಾಜಿಯಗುವ ಮಾತೆ ಇಲ್ಲ. ನೀವು ತಿನ್ನಲು ಇಷ್ಟಪಡುವ ವಿಷಯದಲ್ಲಿ ನಿಮಗೆ ಕೆಲವೊಂದು ಹೊಂದಾಣಿಕೆ ಅಗತ್ಯವಿದ್ದರೆ ಅದನ್ನು ಕಾರ್ಯಗತಗೊಳಿಸುವುದು ಸುಲಭ.

ಹಾಗೆ ರೆಸಾರ್ಟ್ ನಲ್ಲಿ ಉಳಿದುಕೊಳ್ಳುವಾಗ ಉನ್ನತಮಟ್ಟದ ವ್ಯವಸ್ಥಾಪಕರ ಸ್ವಾಗತ ಮೇಜುಗಳು ಹೆಚ್ಚಿನ ಸಂದಶಕರೊಂದಿಗೆ ವೃತ್ತಿಪರವಾಗಿ. ಭೋದಕರಂತೆ ವೈಯಕ್ತಿಕ ಆರೈಕೆಯನ್ನು ಪಡೆಯುವ ವ್ಯಾಪ್ತಿ ಕಡಿಮೆಯಾಗಿದೆ. ನಮ್ಮಲ್ಲಿ ಗ್ರಹಕರಂತೆ ಪರಿಗಣಿಸದೆ ಅತಿಥಿ ಗಳಂತೆ ನೋಡಿಕೊಳ್ಳುವುದು ವಿಶೇಷ. ರೆಸಾರ್ಟ್ ನಲ್ಲಿ ಕೇವಲ ಆಟೋಟಗಳಲ್ಲಿ ತೊಡಗಿಸಿಕೊಂಡು ಈಜು ಹಾಗೂ ಊಟಗಳ ಬಗೆಗಿನ ಚಟುವಟಿಕೆ ಸಾಮಾನ್ಯ. ಆದರೆ ನಮ್ಮಲಿ ಹೋಂ ಸ್ಟೇ ನಲ್ಲಿ ಕಲಿಯುವ ಪಾಠ ಹಾಗೂ ಆಟ.. ಜೀವನದ ಉದ್ದಕು ನೆನಪಿನ ತಂತಿ ಗಳಂತೆ ನಾದ ಸ್ವರ ಅಚ್ಚೆಯಂತೆ ಕೂತುಬಿಡುತ್ತದೆ ಹಾಗೆ ವೈಯಕ್ತಿಕ ಅನುಭವದ ಮಟ್ಟವನ್ನು ಒದಗಿಸುತ್ತದೆ.
ಯಾವ ದೇವಶಿಲ್ಪಿ ಇಂತು ನಿನ್ನ ಕೊರೆದನೋ |
ಯಾವ ಬಣ್ಣಗಾರ ನಿಂತು ರಂಗನೇರೆದನೋ||
ಒಲವಿನೋಡೆಯ ಸೋಬಾಗಿನೋಡೆಯ|
ನೊಡನೆ ಕೂಡಿ ಸಂಚುಮಾಡಿ ನಿನ್ನ ಪಡೆದನೆ||
ಮಳೆಯಬಿಲ್ಲ ಕರಾಗಿಸಿಂತು ನಿನ್ನ ಕಡೆದನೆ|
ಕುವೆಂಪು ರವರ ನವಿಲನ್ನು ವರ್ಣಿಸೋ ರೀತಿ ಇದು ಅಂದಗೆ ಇದನ್ನ ಯಾಕ್ ಹೇಳ್ದೆ ಅಂದ್ರೆ ನೀವ್ ಹೋಂಸ್ಟೇ ಲೀ ಇದ್ರೆ ಪ್ರಕೃತಿಯ ನೈಜ ಅನುಭವ ಪಡೆಯೋಕೆ ಸದ್ಯ

ರೆಸಾರ್ಟ್ ನಂಥ ವಾಣಿಜ್ಯ ವಾಗಿರದೆ (commercialized) ಪ್ರಕೃತಿಯ ದಟ್ಟ ಕಾಡಿನ ಮದ್ಯೆ ಗಿರಿ ಶಿಕರ ಮಲೆಗಳಲ್ಲಿ ಹಾಗೆ ನಿಮ್ಮನ್ನ ತೆಲಿಸೋ ಮೋಡ. ಭೂಮಿ ಆಕಾಶಕ್ಕೂ ಏಣಿ ಹಾಕಿ ಹತ್ತಿರುವಂತಹ ಪ್ರತ್ಯೇಕ ಅನುಭವ ಯಾವುದೋ ಸ್ವಪ್ನ ಲೋಕಕ್ಕೆ ಬಂದಿರುವಂತೆ ಭಾಸವಾಗುವುದು ಸುಳಲ್ಲ . ಹೋಂ ಸ್ಟೇ ಖಾಸಗಿಯಾಗಿ ಬಹಳ ಸುರಕ್ಷತೆ ಇದ್ದು ಮಾಲೀಕರ ಭಾಷೆ ಜಾನಪದ ಶೈಲಿಯ ಮಾತುಗಳು ನಿಮ್ಮ ಸಂಭಾಷಣೆಗೆ ಮನೋರಂಜನೆ ಮತ್ತು ಪ್ರಭುದ್ದವಾಗಿವೆ ನೀವು ನಿಮ್ಮ ಜೀವನಕ್ಕಾಗಿ ಹೊಸ ಸ್ನೇಹವನ್ನು ರೂಪಿಸಬಹುದು ಇವರು ನಿಮ್ಮನು ಅಪ್ತರಂತೆ ಸ್ವಾಗತಿಸಿ ಮತ್ತು ಸಾಮಾನ್ಯವಾಗಿ ತಮ್ಮ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಎಂದಿಗೂ ಹಿಂಜರಿಯುವುದಿಲ್ಲ . ಕಾಡಿನ ಮದ್ಯೆ ನಿರ್ಜರಿಗಳ ತಪ್ಪಲು ಮುಂಜಾವಿನ ಸೂರ್ಯೋದಯ ಸಂಜೆಯ ಸೂರ್ಯಾಸ್ತಮಾನ ಕಣ್ ತುಂಬಿಕೊಳ್ಳುವುದು ಕಾಂಕ್ರೀಟ್ ಕಾಡಿನಲ್ಲಿ ದಿನನಿತ್ಯ
ದುಡಿದು ಸೋತು ಬೆಂಡಾದ ಎಷ್ಟೋ ಜನರಿಗೆ ಇಂತಹ ಪ್ರಕೃತಿಯ ಚಿತ್ರಣ ಬದುಕಿನ ಹೊಸ ಆಶಾಕಿರಣ ವಾಗಿರುವುದಂತು ಸತ್ಯ ಹಕ್ಕಿ ಪಕ್ಷಿಗಳ ಗಾಯನ ಜೀರುಂಡೆ ಗಳ ಸ್ವರ. ಮೆದುಳಿಗೆ ಪ್ರಕೃತಿ ರಚಿಸಿರುವ ಸಾಹಿತ್ಯದ ಹೊಸ ಸಂಯೋಜನೆ ಯಂತೆ ಮನಸಿನ ಬಾರವನ್ನು ಇಳಿಸುವುದಂತು ನಿಜ.ಇಂತಹ ಅನುಭವ ರೆಸಾರ್ಟ್ ಗಳಲ್ಲಿ ಸಿಗುವುದು ಹಸದ್ಯ .
ಕುಟುಂಬದವರಿಗೆ , ಸ್ನೇಹಿತರಿಗೆ , ದಂಪತಿಗಳಿಗೆ ಮೋಜಿನ ಜೊತೆಗೆ ನಮ್ಮ ನಾಡಿನ ಸಿರಿ ಸಂಪತ್ತಿನ ಬಗ್ಗೆ ಒಂದಿಷ್ಟು ಮಾಹಿತಿ ಸಿಗುವುದಂತು ಪಕ್ಕ . ಹಾಗೆ ನಿಮ್ಮ ಪ್ರವಾಸದ ನೆನಪು ನಿಮ್ಮ ಕ್ಯಾಮೆರಾ ದಲ್ಲಿ ಕ್ಲಿಕ್ಕಿಸಿರುವ ಚಿತ್ರ ಗಳೆ ನಿಮಗೊಂದು ಕಥೆಯ ರೂಪದಲ್ಲಿ ನಿಮ್ಮ ಕಣ್ ಮುಂದೆ ಹಾಗೆ ಬಂದು ಹೋಗೋದಂತು ಗ್ಯಾರಂಟಿ.ರಾತ್ರಿಯ ವೇಳೆ ಸಂಗೀತ ಸಂಜೆ ಎಲ್ಲರೂ ಕೂಡಿ ಆಡುವ ಡಾನ್ಸ್, ಚಳಿ ಕಾಯಿಸಲು ಫೈರ್ ಕ್ಯಾಂಪ್ , ಬೆಳಿಗ್ಗಿನಿಂದ ಬೆಟ್ಟ ಕಾಡು ಜಲಪಾತ ಗಳಲ್ಲಿ ಮಾಡಿದ ಮಸ್ತಿ ರಾತ್ರಿವೇಳೆ ಊಟ ಮುಗಿಸಿ ಹಾಗೆ ಕುಳಿತುಕೊಂಡಾಗ ಕಾಲಿನ ಪಾದ ಪದ ಕಟ್ಟಿ ಹಾಡಿದಂತೆ. ಆ ರಾತ್ರಿ ಮಲಗಿದಾಗ ಸಿಗುವಂತಹ ನಿದ್ರೆ ಏನೋ ಸಾದಿಸಿ ಬರುವಂತಹದ್ದು. ಹಾಗೆ ನಿಮಗೆ ಅನ್ವೆಷಿಸದ ಹಾಗೂ ಅನ್ವೆಷಿಸಿರುವ (exploring the unexplored) ಜಾಗಳು ಗೂಗಲ್ ಆಂಟಿಗು ಸಿಗದ ಕೆಲವೊಂದು ಸುಂದರ ತಾಣಗಳು ಹೋಂ ಸ್ಟೇ ಗಳಿಂದಲೆ ಕಾಣಸಿಗುವುದು.

ನಿಮ್ಮ ಬದುಕಿನ ಹೊಸ ದಾರಿ ಕಥೆ ಎಲ್ಲವೂ ಒಂದು ಪ್ರವಾಸದಲ್ಲಿ ಕಾಣುವುದಂತು ಸತ್ಯ. ಹಾಗೆ ನೀವು ಇಲ್ಲಿ ಯಾವುದೇ ಬಯದಿಂದ ಇರುವುದು ಬೇಡ ನಿಮ್ಮ ಕುಟುಂಬದ ಬೆಂಬೇಲಕ್ಕೆ ಸದ ನಿಮ್ಮೊಡನೆ ಸಂಪರ್ಕದಲ್ಲಿದ್ದು ನಾವು ಎಂದಿಗೂ ನಿಮ್ಮೊಡನೆ.

ಕೋವಿಡ್ 19 ಸುರಕ್ಷತೆಗೆ ಕ್ರಮಗಳು

ಮ್ಮ ಸುರಕ್ಷತೆ ನಮ್ಮ ಹೊಣೆನಿಮ್ಮ ಕುಟುಂಬ , ಸ್ನೇಹಿತರು , ಪ್ರೀತಿ ಪಾತ್ರರ ಆರೋಗ್ಯಕ್ಕೆ ನಮ್ಮ ಹೆಚ್ಚಿನ ಆದ್ಯತೆ ಸರ್ಕಾರದ ಸೂಚನೆ ಅನುಸ್ಕರಿಸಿ ನಮ್ಮ ಹೋಂ ಸ್ಟೇ ಶುಚಿಗೊಳಿಸಿ ಸ್ಟರಿಲೈಸ್ ಮಾಡಲಾಗಿದೆ. ಅತಿಥಿಗಳ ಕೊಠಡಿ ಹಾಗೂ ಶೌಚಾಲಯ , ಊಟದ ಕೋಣೆ. ಹೋಂ ಸ್ಟೇ ಸುತ್ತಲೂ ಸ್ಟರಿಲೈಸ್ ಮಾಡಲಾಗಿದೆ ಹಾಗೆ ಬಂದ ಎಲ್ಲ ಅತಿಥಿಯಾರನ್ನು sanitizer ಮಾಡುವ ಮೂಲಕ ಅತಿಥಿಗಳ ಸುರಕ್ಷಾ ಕ್ರಮಗಳನ್ನು ಒಳಗೊಂಡಿದೆ. ಯಾವುದೇ ಸಮಯದಲ್ಲೂ ಹೋಂಸ್ಟೇ ಮಾಲೀಕರು ಅತಿಥಿಗಳ ಬಗೆಗಿನ ಎಲ್ಲ ರೀತಿಯ ಆರೋಗ್ಯ ಕ್ಷೇಮವೆ ಮೊದಲ ಧ್ಯೆಯ. ಚಿಂತೆ ಬಿಡಿ ನಿಮ್ಮ ಮನೆಯ ಅನುಭವ ರದೊಂದು ಮನೆಯಲ್ಲಿ . ನೀವ್ ಇರುವಂತಹ ಮನೆ ರೆಸಾರ್ಟ್ ಗಳ ಹಾಗೆ ದುಡಿಮೆಗಾಗಿ ಇದ್ದು ಹೋಗುವಂತಹ ಮನೆಗಳತೆ ಅಲ್ಲ ನೀವು ಇರುವಂತಹ ಸಮಯ ಕಳೆವ ಮನೆ ಒಬ್ಬ ಮಾಜಿ ಸೈನಿಕರ ಮನೆ ಹಾಗಿರಬಹುದು ಒಬ್ಬ ಜಾನಪದ ಜಿಂತಕರ ಮನೆ ಹಾಗಿರಬಹುದು , ಅಥವಾ ಚಿತ್ರೀಕರಣ ಗೊಂಡ ಮನೆ ಹಾಗಿರಬಹುದು , ಒಬ್ಬ ಪಾಳೇಗಾರ ಮನೆ ಸಹ ಹಗಿರಬಹುದು , ಹೀಗೆ ಕೆದುಕಿ ಹೋದರೆ ನೀವು ಇರುವಂತಹ ಸ್ಥಳದ ಕೆದುಕಿದರೆ ರೋಚಕ ಕಥೆಗಳು ಹಾಗೆ ಕಣ್ಮುಂದೆ ಸಾಗುವುದು . ಹಾಗೆಯೇ ಅಲ್ಲಿನ ಸಂಸ್ಕೃತಿ ನಾಟಕ , ಯಕ್ಷಗಾನ , ಹುಲಿ ಕುಣಿತ , ಭರತನಾಟ್ಯ , ಬೀದಿನಾಟಕ , ಬಿದಿದ್ರು ಬೊಂಬೆಯಾಟ , ಹೀಗೆ ಹತ್ತುಹಲವು ರೀತಿಯ ಸಂಸ್ಕೃತಿ ಕಲೆಗಳು ನೋಡುವಂತಹ ಸಂದರ್ಭ ಅಥವಾ ಅವಕಾಶ ಸಿಗುವುದು ಕಚೀತ. ನಿಮ್ಮ ನೋವು ನಿಮ್ಮ ಕುಷಿ ಹಂಚಿಕೊಳ್ಳಲು ಪ್ರಕೃತಿಗಿಂತ ಉತ್ತಮ ಒಡನಾಡಿ ಮತ್ತೊಂದಿಲ್ಲ . ಸದಾ ನಿಮ್ಮ ಸೇವೆಯಲ್ಲಿ ನಮ್ಮ ಹೋಂಸ್ಟೇ.